ಲಘು ಸಿದ್ಧಾಂತ ಕೌಮುದೀ - ಕನ್ನಡಾನುವಾದ:

 ನಿವೇದನಮ್


ಸದ್ಭುದ್ಧಿ ಪ್ರಚೋದಕರಾದ ಶ್ರೀಗುರುವರ ಬ್ರ. ಶ್ರೀ. ಕೆ. ಶ್ರೀನಿವಾಸಾಚಾರ್ಯರನ್ನೂ ಬ್ರ. ಶ್ರೀ ನೆರೂರು ಕೃಷ್ಣಾಚಾರ್ಯರನ್ನೂ ಮನಸಾ, ಶಿರಸಾ ವಂದಿಸಿ ನಾಲ್ಕು ಮಾತುಗಳನ್ನು ಬರೆಯಲು ಬಯಸುತ್ತೇನೆ.

ನಮ್ಮ ಭಾರತದ ಸಕಲಭಾಷೆಗಳಿಗೂ ಸಂಸ್ಕೃತವೇ ಮೂಲ ಭೂತವಾದುದೆಂದು ಸಕಲರಿಗೂ ತಿಳಿದ ವಿಷಯ.ದಕ್ಷಿಣದ ಭಾಷೆಗಳ ವಿಷಯದಲ್ಲಿ ಇದು ವಿವಾದಾಸ್ಪದವಾದರೂ ಗಂಗಾಯಮುನೆಯರ ಸಂಗಮದಂತೆ ಅನಾದಿಯಿಂದಲೂ ನಮ್ಮ ಮಾತೃ ಭಾಷೆಗಳಲ್ಲಿ ಸಂಸ್ಕೃತ ಪದಗಳು ಸಂವಿತವಾಗಿ ಭೇದಕ್ಕೆ ಅವಕಾಶವಿಲ್ಲದಂತೆ ಹಾಸು ಹೊಕ್ಕಾಗಿ ಬೆರೆತು ಒಂದಾಗಿ ತೋರುತ್ತಿವೆ. ನಮ್ಮ ಕನ್ನಡ ಭಾಷೆಯು ಸಂಸ್ಕೃತ ಸಂಮಿಶ್ರಣದಿಂದ ಎಷ್ಟು ಉಜ್ವಲವಾಗಿದೆಯೆಂಬುದು ಪಂಪ, ಜಗನ್ನಾಥ, ಕುಮಾರ ವ್ಯಾಸ ಮುಂತಾದ ಉದ್ದಾಮಕವಿಗಳ ಸರಸ ಕಾವ್ಯಗಳ ಪರಿಶೀಲನೆಯಿಂದ ಅಭಿವ್ಯಕ್ತ ವಾಗುತ್ತದೆ. ಸಂಸ್ಕೃತ ವ್ಯಾಕರಣನಿಯಮಗಳನ್ನಳವಡಿಸಿಕೊಂಡೇ ನಮ್ಮ ದೇಶೀಯ ಭಾಷಾವ್ಯಾಕರಣಗಳು ರಚಿತವಾಗಿವೆ ಎಂದು ವಿಮರ್ಶಕರಿಗೆ ತಿಳಿದ ವಿಷಯವೇ ಭಟ್ಟಾಕಳಂಕನ ಶಬ್ದಾನುಶಾಸನ ವೆಂಬ ಕನ್ನಡ ವ್ಯಾಕರಣ ಗ್ರಂಥವು ಸಂಸ್ಕೃತಭಾಷೆ ಯಲ್ಲೇ ಬರೆಯಲ್ಪಟ್ಟು ದುದರಿಂದ ಆಗ ಸಂಸ್ಕೃತಕನ್ನಡಗಳ ಬಾಂಧವ್ಯ ಎಷ್ಟರಮಟ್ಟಿಗೆ ಇತ್ತೆಂಬುದು ವ್ಯಕ್ತವಾಗುತ್ತದೆ. ಸಂಸ್ಕೃತಭಾಷೆಯು ವ್ಯಾಕರಣನಿಯಮದಿಂದ ಸುಬದ್ಧವಾದುದರಿಂದಲೇ ಇಂದಿಗೂ ಯಾವ ಭಾಷೆಗಳ ಆಘಾತಕ್ಕೂ ಒಳಗಾಗದೆ ಅಚ್ಚಳಿಯದೆ ಕಂಗೊಳಿಸುತ್ತಿದೆ.

ಪದಗಳ ಪ್ರಕೃತಿಪ್ರತ್ಯಯಾದಿಗಳನ್ನು ನಿರ್ವಚನ ಮಾಡುವ ಶಾಸ್ತ್ರಕ್ಕೆ ವ್ಯಾಕರಣ ಶಾಸ್ತ್ರವೆಂದು ಹೆಸರು. ಬ್ರಾಹ್ಮಣವಾಕ್ಯಗಳಲ್ಲಿ ವಚನ, ವಿಭಕ್ತಿ ಮುಂತಾದ ಪದಗಳು ವ್ಯವಹೃತವಾಗಿರುವುದರಿಂದ ವೇದಕಾಲದಲ್ಲಿಯೇ ಇದು ಪ್ರಸಿದ್ಧವಾಗಿತ್ತೆಂದು ತಿಳಿ ಯುತ್ತದೆ. ಈ ಎಲ್ಲಾ ಪದಗಳೂ ಧಾತುವಿನಿಂದಲೇ (ಕ್ರಿಯಾಪದ) ಆಗಿವೆಯೆಂಬ ಶಾಕಟಾಯನರ ಮಾತನ್ನು ಯಾಸ್ಕರು ಉದಾಹರಿಸಿರುತ್ತಾರೆ. ಇದರಿಂದ ಪವಿತ್ರವಾದ ಈ ವ್ಯಾಕರಣವು ಯಾಸ್ಕರ ನಿರುಕ್ತಕ್ಕಿಂತ ಪೂರ್ವದಲ್ಲಿಯೇ ನಾನಾ ಋಷಿಗಳಿಂದ ವಿಸ್ತರಗೊಳಿಸಲ್ಪಟ್ಟಿರುವುದೆಂದು ತಿಳಿಯುತ್ತದೆ. ಶೌನಕರ ಪ್ರಾತಿಶಾಖ್ಯ ಗ್ರಂಥದಲ್ಲಿರುವ ಪ್ರತ್ಯಯಗಳ ಕೃತ್ತದ್ಧಿತ ವಿಭಾಗದಿಂದ ನಿರುಕ್ತಾದಿಗಳಿಗಿಂತಲೂ ಈ ಸಂಜ್ಞೆಗಳು ಪ್ರಾಚೀನವೆನ್ನಬೇಕು. ರಾಮಾಯಣದಲ್ಲಿ ನವ ವ್ಯಾಕರಣಗಳೂ ಪ್ರಸಕ್ತವಾದುದರಿಂದ ಪಾಣಿನಿಯ ವ್ಯಾಕರಣವು ರಾಮಾಯಣಕ್ಕಿಂತ ಪ್ರಾಚೀನವಾದುದೆಂದು ಹೇಳಬಹುದು.

ಮಹಾಭಾಷ್ಯದಲ್ಲಿ ಆಪಿಶಲ, ಕಾಶಕೃತ್ಮ ಮುಂತಾದವರ ನಾಮ ನಿರ್ದಿಷ್ಟವಾದುದರಿಂದ ಆ ಕಾಲದಲ್ಲಿ ನವವ್ಯಾಕರಣಗಳೂ ಉಪಲಬ್ದವಾಗುತ್ತಿತ್ತೆಂದು ತಿಳಿಯುತ್ತದೆ. ಆದರೆ ಅವೆಲ್ಲವೂ ವೈದಿಕ ಶಬ್ದಗಳನ್ನು ನಿರ್ವಚನ ಮಾಡಿರುವುದರಿಂದ, ಕೇವಲ ಕೆಲವು ಲೌಕಿಕ ಶಬ್ದಗಳ ವ್ಯುತ್ಪತ್ತಿಯನ್ನು ತಿಳಿಸಿರುವುದರಿಂದಲೂ ಪಾಣಿನಿಗಳು ಈ ಎರಡೂ ಶಬ್ದಗಳ ನಿರ್ವಚನವನ್ನು ಮಾಡಿ ತೋರಿಸಿರುವುದರಿಂದಲೂ ಇವರ ವ್ಯಾಕರಣಕ್ಕೆ ಸರ್ವ ಶ್ರೇಷ್ಟತೆ ಪ್ರಾಪ್ತವಾಗಿದೆ. ಇದರಿಂದಲೇ ಉಭಯ ಶಬ್ದ ಜ್ಞಾನವುಂಟಾಗುತ್ತಿರು ನಾಗ ಜನರ ಉಪೇಕ್ಷೆಯಿಂದಲೇ ಇತರ ವ್ಯಾಕರಣಗಳು ನಷ್ಟವಾಗಿರಬಹುದು. ಪಾಣಿ ನಿಗಳ ಸೂತ್ರವಿನ್ಯಾಸ ಕ್ರಮವು ಅಸದೃಶವಾದುದೆಂದು ಶ್ರೀ ಶಂಕರಾಚಾರ್ಯ ಮುಂ ತಾದ ವಿಭೂತಿ ಪುರುಷರೇ ಶ್ಲಾಘಿಸಿರುತ್ತಿರುವಾಗ ಈಗಿನ ಪಾಶ್ಚಾತ್ಯ ವಿಮರ್ಶಕರು ಹೊಗಳುವುದು ವಿಶೇಷವೇನಲ್ಲ. ಈ ವ್ಯಾಕರಣ ಸಿದ್ದಾಂತಗಳನ್ನು ವ್ಯಾಡಿಯೆಂಬುವನು ಲಕ್ಷ ಶ್ಲೋಕಗಳಿಂದ ವಿವರಿಸಿರುವನೆಂದು ಕಥಾ ಸರಿತ್ಸಾಗರದಿಂದ ತಿಳಿಯುತ್ತದೆ, ಪಾಣಿನಿಗಳ ಮುಂದೆ ವ್ಯಾಖ್ಯಾ ಗ್ರಂಥಗಳ ಪ್ರಾಬಲ್ಯವು ಹೆಚ್ಚಾಯಿತು. ವರರುಚಿಗಳು . (ಕಾತ್ಯಾಯನಿ) ಈ ಸೂತ್ರಗಳಿಗೆ ವಾರ್ತಿಕಗಳನ್ನು ರಚಿಸಿರುತ್ತಾರೆ. ಇವರು ಸಮಕಾ ಕುಂದು ಕಥಾಸರಿತ್ಸಾಗರದಿಂದ ತಿಳಿದು ಬಂದರೂ ವಿಮರ್ಶಕರು ಇದನ್ನು ಅಂಗೀಕರಿ ಸುವುದಿಲ್ಲ. ಸುಮಾರು ಕ್ರಿಸ್ತಪೂರ್ವ ಆರನೇ ಶತಮಾನ, ಅಥವಾ 4ನೇ ಶತಮಾನ ಪಾಣಿನಿಯ ಕಾಲವೆಂದೂ, ಅವರ ಅಭಿಪ್ರಾಯ. ಕ್ರಿಸ್ತಪೂರ್ವ ಮೂರನೇ ಶತಮಾನ ವರರುಚಿಯ ಕಾಲವೆಂದೂ ಅವರ ಅಭಿಪ್ರಾಯ. ಕ್ರಿಸ್ತಪೂರ್ವ ಎರಡನೇ ಶತಮಾನ ದಲ್ಲಿ ಪತಂಜಲಿ ಮಹರ್ಷಿಗಳು ಇವುಗಳಿಗೆ ಮಹಾಭಾಷ್ಯವನ್ನು ರಚಿಸಿದರು. ಈ ಸೂತ ಗಳಿಗೆ ಅನೇಕರು ವಾರ್ತಿಕಗಳನ್ನು ಬರೆದಿರುತ್ತಾರೆಂದು ಅವರ ಭಾಷ್ಯ ಪರಿಶೀಲನೆಯಿಂದ ತಿಳಿಯುತ್ತದೆ. ಭಾಷೆಯು ಬದಲಾವಣೆ ಹೊಂದುತ್ತಿದ್ದುದರಿಂದಲೂ, ಉತ್ತರೋತ್ತರ ಈ ಋಷಿಗಳು ಶಬ್ದ ವ್ಯತ್ಯಾಸವನ್ನು ತೋರಿಸಿರುವುದರಿಂದಲೂ ಈ ಮುನಿತ್ರಯರ ಕಾಲದಲ್ಲಿ ಅಂತರವಿರಲೇಬೇಕು. ಪಾಣಿನಿಗಿಂತ ವರರುಚಿಗಳು ಅರ್ವಾಚೀನರೆಂದೂ ದಾಕ್ಷಿಣಾತ್ಯರೆಂದೂ ಮಹಾಭಾಷ್ಯ ಪರಿಶೀಲನೆಯಿಂದಲೇ ವ್ಯಕ್ತವಾಗುತ್ತದೆ. ಮಹಾಭಾ ಪ್ಯದಿಂದ ವ್ಯಾಕರಣದ ನಿಷ್ಕೃಷ್ಟ ಜ್ಞಾನವುಂಟಾಗುವುದಲ್ಲದೆ ಲೌಕಿಕ ನ್ಯಾಯಿಗಳೂ, ವ್ಯವಹಾರಗಳ ವಿಷಯಪ್ರದರ್ಶನ ಶೈಲಿ ಮಂತಾದವುಗಳೂ ತಿಳಿಯುತ್ತವೆ. ಸರ್ವ ಶಾಸ್ತ್ರ ಗ್ರಾಹ್ಯವಾದುದರಿಂದ ಇದಕ್ಕೆ ಮಹತ್ವ ಬಂದಿದೆ. ಇದರಿಂದಲೇ “ ಮಹಾ ಭಾಷ್ಯಂ ವಾ ಪಠನೀಯಮ, ಮಹಾರಾಜ್ಯಂ ವಾ ಪಾಲಯಮ್ ೫ ನಾಣ್ಣುಡಿ ಪ್ರಚುರವಾಗಿದೆ. ಈ ಮಹಾಭಾಷ್ಯಕ್ಕೆ ಕೈಯಟರು ಪ್ರದೀಪವೆಂಬ ವ್ಯಾಖ್ಯಾನವನ್ನು ಬರೆದು ಭಾಷ್ಯಾಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಈ ಪ್ರದೀ ಸಕ್ಕೆ ನಾಗೇಶಭಟ್ಟರು ಉದ್ಯೋತನೆಂಬ ವ್ಯಾಖ್ಯಾನವನ್ನು ಬರೆದು ಭಾಷ್ಯ ಸಿದ್ಧಾಂತ ವನ್ನು ಇನ್ನೂ ಸುಲಭವಾಗಿ ತಿಳಿಯುವಂತೆ ಮಾಡಿರುತ್ತಾರೆ. ಆಮೇಲೆ ಭರ್ತೃಹರಿ ಎಂಬ ವೈಯಾಕರಣನು ಸೂತ್ರ ಭಾಷ್ಯಾಭಿಪ್ರಾಯಗಳಿಂದ ವೈಯಾಕರಣ ಸಿದ್ಧಾಂತ ವನ್ನು ವಾಕ್ಯಪದೀಯವೆಂಬ ಗ್ರಂಥದಲ್ಲಿ ವಿವರಿಸಿ ಭಾಸ್ಕೋಪಕ್ಷಿಪ್ತವಾದ ವೈಯಾಕರಣ ಸ್ಫೋಟವಾದವನ್ನು ಪ್ರಪ್ರಥಮವಾಗಿ ವ್ಯಕ್ತಪಡಿಸಿದನು. ಸ್ಫೋಟಿಸಿದ್ಧಾಂತವೆಂಬ ಗ್ರಂಥವನ್ನು ಆಮೇಲೆ ಮಂಡನ ಮಿಶ್ರರು ಬರೆದಿರುತ್ತಾರೆ. ವಾಮನ, ಜಯಾದಿತ್ಯರು ಸೇರಿ ಸೂತ್ರಗಳಿಗೆ ಕಾಶಿಕಾ ಎಂಬ ವೃತ್ತಿ ಗ್ರಂಥವನ್ನು ಬರೆದಿರುತ್ತಾರೆ. ಇದಕ್ಕೆ ಪದಮಂಜರಿಯೆಂಬ ಭಾಷ್ಯಾಶಯಗಳನ್ನೇ ವ್ಯಕ್ತಪಡಿಸುವ ವಿಸ್ತಾರವಾದ ವ್ಯಾಖ್ಯಾನ ಗ್ರಂಥವನ್ನು ಹರದತ್ತನು ರಚಿಸಿರುತ್ತಾನೆ.

ಹೀಗೆ ಅನೇಕ ವೈಯಾಕರಣರು ವೃತ್ತಿ ವ್ಯಾಖ್ಯಾನ ಗ್ರಂಥಗಳನ್ನು ಬರೆದರೂ ಅವೆಲ್ಲವೂ ಸೂತ್ರ ಕ್ರಮವನ್ನೇ ಅನುಸರಿಸಿರುವುದರಿಂದ ಅದರಂತೆ ಶಬ್ದ ಪ್ರಕ್ರಿಯೆ ತಿಳಿಯುವುದು ಕ್ಲಿಷ್ಟವಾದುದರಿಂದ ಧರ್ಮಕೀರ್ತಿಯೆಂಬ ಜೈನ ವೈಯಾಕರಣನು ಸುಲಭವಾದ ಬೇರೆ ರೀತಿಯನ್ನವಲಂಬಿಸಿ ವೃತ್ತಿ ಗ್ರಂಥವನ್ನು ಬರೆದನು. ಆ ಕ್ರಮ ವನ್ನೇ ಅನೇಕ ವೈಯಾಕರಣರು ಅನುಸರಿಸುತ್ತಾ ಬಂದುದರಿಂದ ಶ್ರೀಭಟ್ಟೋಜಿ ದೀಕ್ಷಿತರೂ ಆ ಕ್ರಮದಿಂದಲೇ ಸಿದ್ದಾಂತ ಕೌಮುದಿಯೆಂಬ ಗ್ರಂಥವನ್ನು ಬರೆದು ಲೋಕೋಪಕಾರಿ ಮಾಡಿರುತ್ತಾರೆ. ಇವರು ಸೂತ್ರ ಕ್ರಮವನ್ನು ಅನುಸರಿಸಿಯೂ (ಶಬ್ದ ಕೌಸ್ತುಭ) ಬೃಹದ್ವಾಖ್ಯಾನ ಮಾಡಿರುವುದಲ್ಲದೆ ವೈಯಾಕರಣ ಸಿದ್ಧಾಂತವನ್ನು ತಿಳಿಸುವ ಸ್ವತಂತ್ರ ಗ್ರಂಥಗಳನ್ನು ರಚಿಸಿರುತ್ತಾರೆ. ಇವರ ಗ್ರಂಥಗಳಿಗೆ ಭಾಷ್ಯದಂತೆ ನಾಗೇಶಭಟ್ಟರು ವಿಸ್ತಾರವಾಗಿ ವ್ಯಾಖ್ಯಾನ ಮಾಡಿದುದಲ್ಲದೆ ಮಂಜೂಷಾ ಎಂಬ ಗ್ರಂಥದಲ್ಲಿ ವೈಯಾಕರಣರ ಎಲ್ಲಾ ಸಿದ್ಧಾಂತಗಳನ್ನು ಪರ ಮತಖಂಡನಪೂರ್ವಕ ವಾಗಿಯೂ ಪ್ರತಿಪಾದಿಸಿರುತ್ತಾರೆ. ಅನೇಕ ಶಾಸ್ತ್ರ ಗ್ರಂಥಗಳನ್ನೂ ಬರೆದಿರುವುದರಿಂದ ಇವರ ಪಾಂಡಿತ್ಯ ಪ್ರಕರ್ಷವು ಅಗಾಧವಾಗಿದೆ. ಹೀಗೆ ಇನ್ನೂ ಅನೇಕ ವೈಯಾಕರ ಣರು ವ್ಯಾಕರಣ ಸಿದ್ಧಾಂತ ಪ್ರತಿಪಾದಕ ಗ್ರಂಥಗಳನ್ನೂ ವ್ಯಾಖ್ಯಾನ ಗ್ರಂಥಗಳನ್ನೂ ರಚಿಸಿ ವ್ಯಾಕರಣ ಶಾಸ್ತ್ರವನ್ನು ಅಪಾರ ಅನಂತವನ್ನಾಗಿ ಮಾಡಿರುತ್ತಾರೆ.

ಆದರೆ, ಸಂಸ್ಕೃತ ಭಾಷಾ ಜ್ಞಾನವನ್ನು ಅಪೇಕ್ಷಿಸುವ ಬಾಲಕರಿಗೆ ಇವೆಲ್ಲವೂ ಮೊದಲು ಕ್ಲಿಷ್ಟವಾಗಿರುವುದರಿಂದ, ಬಾಲಕರ ಉಪಯೋಗಕ್ಕಾಗಿ ಭಟ್ಟೋಜಿದೀಕ್ಷಿತರ ಶಿಷ್ಯರಾದ ಶ್ರೀ ವರದರಾಜರು ಹದಿನೇಳನೆಯ ಶತಮಾನದಲ್ಲಿ ಲಘು ಸಿದ್ಧಾಂತ ಕೌಮುದಿಯೆಂಬ ಗ್ರಂಥವನ್ನು ಬರೆದಿರುತ್ತಾರೆ. ಇವರು ಪಾಣಿನಿ ಸೂತ್ರಗಳಲ್ಲಿ ಅತ್ಯು ಪಯುಕ್ತವಾದವುಗಳನ್ನೇ ಆರಿಸಿಕೊಂಡು ಅವುಗಳಿಗೆ ಸರಳ ಸಂಸ್ಕೃತ ಭಾಷೆಯಲ್ಲಿ ವೃತ್ತಿ ಮತ್ತು ಉದಾಹರಣೆಗಳನ್ನು ಬರೆದು ಬಾಲಕರಿಗೆ ಸುಲಭವಾಗಿ ತಿಳಿಯುವಂತೆ ಮಾಡಿರುತ್ತಾರೆ, ಈ ಗ್ರಂಥವು ಸೂತ್ರ ವೃತ್ತಿ ಕ್ರಮಗಳಲ್ಲಿ ಸಿದ್ಧಾಂತ ಕೌಮುದಿಯ ಕ್ರಮವನ್ನು ಅನುಸರಿಸಿದರೂ ಪ್ರಕರಣ ನಿವೇಶಕ್ರಮದಲ್ಲಿ ಸ್ವಾತಂತ್ರವನ್ನು ಪಡೆದಿದೆ.

ಅವಾಂತರ ಪ್ರಕರಣಗಳನೇಕವಿದ್ದರೂ ಮುಖ್ಯವಾಗಿ ಎಂಟನ್ನು ಪರಿಗಣಿಸಬಹುದು. ಇವುಗಳಲ್ಲಿ ಉತ್ತರೋತ್ತರಗಳಿಗೆ ಪೂರ್ವ ಪೂರ್ವಗಳ ಸಾಪೇಕ್ಷವಿರುವುದರಿಂದ ಇಲ್ಲಿನ ಕ್ರಮವು ಸಮಂಜಸವಾಗಿದೆ, ಸಂಜ್ಞಾ ಪ್ರಕರಣವು ಎಲ್ಲಾ ಪ್ರಕರಣಗಳಿಗೂ ಬೇಕಾದುದರಿಂದ ಮೊದಲು ಹೇಳಿದೆ. ಸಂಧಿಗಳು ಸುಬಂತಾದಿಗಳಲ್ಲಿ ಅಪೇಕ್ಷಿತಗಳಾದುದರಿಂದ ಎರಡನೆಯದಾಗಿ ಹೇಳಿದೆ. ನಾಮಪದದ ಮೇಲೂ ತಿಙ್ ಪ್ರತ್ಯಯಗಳನ್ನು ಹೇಳುವುದರಿಂದ ತಿಙಂತಕ್ಕಿಂತ ಮೊದಲು ಸುಬಂತ ವಿವೃತವಾಗಿದೆ. ಧಾತುಗಳ ಮೇಲೆ ಕೃತ್‌ಪ್ರತ್ಯಯ ವಿಧಾನ ಮಾಡುವುದರಿಂದ ತಿಙಂತವಾದ ಮೇಲೆ ಕೃದಂತ ಪ್ರಕರಣ ಹೇಳಿದೆ. ಕೃದಂತ ನಾಮಗಳ ಮೇಲೆ ತದ್ಧಿತ ಪ್ರತ್ಯಯಗಳನ್ನು ವಿಧಾನ ಮಾಡುವುದರಿಂದ ತದ್ದಿತ ಪ್ರಕರಣವನ್ನು ಆಮೇಲೆ ಹೇಳಿರುತ್ತಾನೆ. ಕೃದಂತ ತದ್ಧಿತಾಂತ ಪದಗಳಿಂದ ಸಮಾಸ ಮಾಡುವುದರಿಂದ ಸಮಾಸ ಪ್ರಕರಣ ತದ್ಧಿತವಾದ ಮೇಲೆ ಹೇಳಿದೆ. ಸ್ತ್ರೀ ಪ್ರತ್ಯಯಗಳನ್ನು ಸಮಾಸದ ಮೇಲೂ ಹೇಳುವುದರಿಂದ ಕೊನೆಗೆ ಅವುಗಳನ್ನು ವಿವರಿಸಿರುತ್ತಾನೆ. ವ್ಯಾಕರಣದ ಆಳವಾದ ಜ್ಞಾನಕ್ಕೆ ಸಿದ್ಧಾಂತ ಕೌಮುದ್ಯಾದಿ ಗ್ರಂಥಗಳನ್ನು ವ್ಯಾಸಂಗ ಮಾಡಬೇಕಾದರೂ ಸಂಸ್ಕೃತ ಭಾಷಾ ಜ್ಞಾನಕ್ಕೆ ಈ ಲಘು ಸಿದ್ದಾಂತ ಕೌಮುದೀ ಗ್ರಂಥದ ಅಧ್ಯಯನ ಪರ್ಯಾಪ್ಣವಾಗಿದೆ.

ಈ ಗ್ರಂಥವು ಭಾರತದ ಪ್ರಮುಖ ಭಾಷೆಗಳಾದ ಹಿಂದೀ, ಬಂಗಾಳಿ, ಆಂಧ, ಮುಂತಾದ ಭಾಷೆಗಳಲ್ಲಿ ಭಾಷಾಂತರಿತವಾಗಿ ಆಯಾಯ ಪ್ರಾಂತದ ಜನರಿಗೆ ಸಂಸ್ಕೃ ತವನ್ನು ಕಲಿಯಲು ಬಹು ಸಹಾಯಕವಾಗಿದೆ. ಪ್ರಕೃತ ಕನ್ನಡ ಬಂಧುಗಳೆಲ್ಲರಿಗೂ ಸಂಸ್ಕೃತ ಭಾಷಾ ಜ್ಞಾನವು ಸುಲಭವಾಗಿ ಉಂಟಾಗಲು ಸಹಾಯವಾಗಲೆಂಬ ಮಹ ದುದ್ದೇಶದಿಂದ ನಾನು ಈ ಗ್ರಂಥಕ್ಕೆ ಕನ್ನಡದಲ್ಲಿ ಸರಳ ವ್ಯಾಖ್ಯಾನವನ್ನು ಬರೆಯುವ ಸಾಹಸ ಮಾಡಿರುತ್ತೇನೆ. ಉಭಯ ಭಾಷಾಭಿಮಾನಿಗಳು ಆದರಿಂದ ಸ್ವೀಕರಿಸುವ ರೆಂದೂ, ಈ ಗ್ರಂಥದ ಅಧ್ಯಯನದಿಂದ ಎಲ್ಲರೂ ಸಂಸ್ಕೃತ ಭಾಷಾ ಜ್ಞಾನವನ್ನು ಅನಾಯಾಸವಾಗಿಯೇ ಹೊಂದುವರೆಂಬ ಭರವಸೆಯಿಂದಲೂ, ವಿಶಾಲ ಕರ್ಣಾಟಕದ ನವೋದಯದ ಸುಸಮಯದಲ್ಲಿ ಕನ್ನಡ ಬಾಂಧವರ ಮುಂದೆ ಇದನ್ನು ಇಟ್ಟಿರುತ್ತೇನೆ. ಇಂಥದೊಂದು ವ್ಯಾಕರಣ ಗ್ರಂಥವು ಕನ್ನಡದಲ್ಲಿ ರಚಿತವಾಗುವುದು ಇದೇ ಮೊದಲೆಂದು ತೋರುತ್ತದೆ. “ಗಚ್ಛತಃ ಸ್ಥಲನಂ ಭವನ” ಎಂಬ ಸೂಕ್ತಿಯಂತೆ ಅಲ್ಪಜ್ಞನಾದ ನನ್ನ ಈ ವ್ಯಾಖ್ಯಾನದಲ್ಲಿ ಲೋಪದೋಷಗಳು ಸಂಭವಿಸಿರಬಹುದು. ಸಹೃದಯರು ಅವುಗಳನ್ನು ತಿದ್ದಿಕೊಳ್ಳುವುದಲ್ಲದೆ ಕೃಪೆಯಿಟ್ಟು ತೋರಿಸಿಕೊಟ್ಟಲ್ಲಿ ಮುಂದಿನ ಮುದ್ರಣದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಲು ಉಪಕಾರವಾಗುತ್ತದೆ.

“ಸದಸಿ ಕಥನಂ ಚಾಪ್ಯು ಪಕೃತೇ” ಎಂಬ ಸೂಕ್ತಿಯಂತೆ ಮೊದಲಿನಿಂದಲೂ ನನಗೆ ಈ ಗ್ರಂಥವನ್ನು ಬರೆಯಲು ಪ್ರೋತ್ಸಾಹವನ್ನಿತ್ತು ಈಗ ಪ್ರಕಾಶಪಡಿಸಲೂ ಉದಾರ‌ ಸಹಾಯವನ್ನು ಮಾಡಿರುವ ಮಹಾರಾಜಕಾಲೇಜಿನ ಫಿಲಾಸಫಿ ಉಪಪ್ರಾಧ್ಯಾಪಕ ಶ್ರೀ. ವಿ. ಮುದ್ದ ಲಿಂಗಣ್ಣ ಎಂ. ಎ, ಮತ್ತು ಮಹಾರಾಣಿ ಕಾಲೇಜಿನ ಹಿಂದೀ ಅಧ್ಯಾಪಕರಾದ ಮ. ದೇವೇಗೌಡ, ಎಂ. ಎ. ಇವರಿಬ್ಬರ ಉಪಕಾರವನ್ನು ಎಷ್ಟು ಸ್ಮರಿಸಿದರೂ ಅಲ್ಪವೇ. ಇವರಿಗೂ, ಇನ್ನೂ ನಾನಾರೀತಿಯಿಂದ ಸಹಾಯವನ್ನು ಒದಗಿಸಿರುವ ನನ್ನ ಮಿತ್ರವೃಂದಕ್ಕೂ ಚಿರಋಣಿಯಾಗಿರುತ್ತೇನೆ. ವ್ಯಾಕರಣಶಬ್ದಗಳು ಕ್ಲಿಷ್ಟವಾದರೂ ತಾಳ್ಮೆಯಿಂದ ಸರಿಯಾಗಿ ನೋಡಿ ಅಂದವಾಗಿ ಮುದ್ರಿಸಿಕೊಟ್ಟ ಶ್ರೀ ವಿನಾಯಕ ಪ್ರೆಸ್ಸಿನ ಮಾಲಿಕರಾದ ಶ್ರೀ ಕೆ. ವೆಂಕಟಸುಬ್ಬಯ್ಯನವರಿಗೂ ಕೃತಜ್ಞತೆ ಗಳನ್ನು ಸಲ್ಲಿಸುತ್ತೇನೆ.

ಗ್ರಂಥಪ್ರಕಾಶನಕ್ಕೆ ಸಾಕಷ್ಟು ಕಾಲಾವಕಾಶವು ಇಲ್ಲದಿದ್ದುದರಿಂದ ಕೆಲವು ಲೋಪ ದೋಷಗಳು ತಲೆ ಹಾಕಿವೆ, ಅವುಗಳನ್ನು ಸಾಧ್ಯವಾದಷ್ಟು ಕ್ರೋಡೀಕರಿಸಿ ಕೊನೆಯಲ್ಲಿ ತೋರಿಸಿದೆ. ಅಭ್ಯಾಸಿಗಳು ಅವುಗಳನ್ನು ನೋಡಿ ಸರಿಪಡಿಸಿ ಓದಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ.

ಕನ್ನಡಮಾತೆಯ ಅಡಿದಾವರೆಗಳಲ್ಲಿ ಸಮರ್ಪಿಸಿರುವ ಈ ಗ್ರಂಥವನ್ನು ಕನ್ನಡ ಬಂಧುಗಳೆಲ್ಲರೂ ಆದರಿಸಿ ಪರಿಶೀಲಿಸಿ ಇದರಿಂದ ಸಂಸ್ಕೃತಭಾಷಾಜ್ಞಾನವನ್ನು ಪಡೆದು ಸುಸಂಸ್ಕೃತರಾಗಿ ನವೋದಿತಕರ್ಣಾಟಕವನ್ನು ಉಜ್ವಲಗೊಳಿಸಲು ಸಮರ್ಥರಾಗಲೆಂದು ಭಗವಂತನನ್ನು ಪ್ರಾರ್ಥಿಸುತ್ತೇನೆ.

ಸಜ್ಜನ ವಿಧೇಯ, ಜಿ. ವಿಷ್ಣುಮೂರ್ತಿಭಟ್ಟ.
ಲೇಖಕ
ಶ್ರೀಮನ್ಮಹಾರಾಜ ಸಂಸ್ಕೃತ ಮಹಾಪಾಠಶಾಲಾ
ಮೈಸೂರು, ತಾ || 1-11-56

No comments:

Post a Comment